Get 3 audiobooks free with a 30-day Free Trial Sign Up Free

[Kannada] - Shikaari

Read Read Own Own

Unabridged Audiobook

Listen Free Now
  • Listen free with a 30-day free trial
  • Choose 2 bonus VIP books
  • Enjoy 10,000 always free books
Ratings
Book
Narrator
Release Date
November 6, 2021
Duration
10 hours 10 minutes
Summary
ವರ್ತಮಾನದ ಸಾಹಿತ್ಯಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗೆ ಸ್ಪಂದಿಸುವ ಕಾದಂಬರಿ 'ಶಿಕಾರಿ'. ಚಿತ್ತಾಲರ ಈ ಕಾದಂಬರಿಯ ಬೀಸು ದೊಡ್ಡದು. 'ಶಿಕಾರಿ'ಯು ಒಂದಕ್ಕಿಂತ ಹೆಚ್ಚು ಸಂವೇದನಾ ಕೇಂದ್ರಗಳಿರುವ ಕಾದಂಬರಿ. ಮನುಷ್ಯನಲ್ಲಿ ಕಾಣಿಸುವ ಮತ್ತೊಬ್ಬನನ್ನು ಸಹಿಸಿಕೊಳ್ಳದಂತಹ ಅಹಂ, ಭಯ, ಆತಂಕಗಳನ್ನು ಕಾದಂಬರಿಯು ಚಿತ್ರಿಸುತ್ತದೆ. ಸಮಾಜದಲ್ಲಿ ಮನೆ ಮಾಡಿರುವ ಜಾತಿವ್ಯವಸ್ಥೆ, ಅನಿವಾರ್ಯ ಸಂಬಂಧಗಳು, ಮನುಷ್ಯನ ಜ್ಞಾನದ ಫಲವಾದ ಸಾಧನೆಗಳನ್ನು ಸ್ವಾರ್ಥಕ್ಕೆ, ರಾಜಕಾರಣಕ್ಕೆ ಬಳಸಿಕೊಳ್ಳುವುದು, ಎದುರಾಳಿಯ ಮುರಿಯಲು-ಹಣಿಯಲು ಬಳಸುವುದು - ಹೀಗೆ ಹಲವು ಸಂಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಕಾದಂಬರಿಯುದ್ದಕ್ಕೂ ಘಟನೆ, ಪ್ರತಿಭಟನೆ, ಅದಕ್ಕೊಂದು ಕಥೆ, ಧ್ವನಿ, ಸಂವೇದನೆಯಾಗಿ ಮೂಡಿ ಬಂದಿದೆ.

ಹಿರಿಯ ಲೇಖಕ-ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರು 'ಶಿಕಾರಿ' ಕುರಿತು 'ಕಾದಂಬರಿಗೆ ಸಹಜವೆನಿಸುವ ವಿಸ್ತಾರ, ಘಟನಾಬದ್ಧವಾದ ಕಥೆಯ ಭದ್ರ ಅಸ್ತಿಭಾರ, ನಾಯಕನ ಜ್ವಲಿಸುವ ಪ್ರಜ್ಞೆಯ ಹಿಲಾಲಿನ ಬೆಳಕಿನಲ್ಲಿ ಗೋಚರಿಸುವ, ಸಾಮಾಜಿಕವಾಗಿ ಬಾಧಿಸುವಂಥ ವಿದ್ಯಮಾನಗಳು ಇವುಗಳಿಂದಾಗಿ ಕಾದಂಬರಿ ವಾಚ್ಯಾರ್ಥ ದಾಟಿ ಪಡೆದುಕೊಳ್ಳುವ ಅರ್ಥಾಂತರ ಮೊದಲಾದ ಕಾರಣಗಳಿಂದ ಶಿಕಾರಿ ಮಾನವಶಾಸ್ತ್ರ, ಸಮಾಜಶಾಸ್ತ್ರ, ಮನಶ್ಯಾಸ್ತ್ರ ಇತ್ಯಾದಿ ಹಲವು ನಿಟ್ಟಿನ ಅಧ್ಯಯನಕ್ಕೆ ಮೌಲ್ಯ ನಿಷ್ಕರ್ಷೆಗೆ ಅರ್ಹವಾದ ಕೃತಿಯಾಗಿದೆ' ಎಂದು ವಿಶ್ಲೇಷಿಸಿದ್ದಾರೆ.
Browse By Category
[Kannada] - Shikaari

[Kannada] - Shikaari

Author: Yashwant Chittal
Read by: ರಾಘು ಶಿವಮೊಗ್ಗ
Listen Free Now Get any book plus
2 bonus VIP books
1 book added to cart
Subtotal
$10.99
View Cart